ನಮ್ಮ ಕಾಲೇಜಿನ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಎಲ್ಲಾ ವಿಭಾಗಗಳ ಕ್ಲಬ್‌ಗಳನ್ನು ರಚಿಸಲಾಗಿದೆ.
ಭೌತ ವಿಜ್ಞಾನ ಕ್ಲಬ್
ಭೌತಶಾಸ್ತ್ರ, ರಸಾಯನ ಶಾಸ್ತ್ರ, ಗಣಿತಶಾಸ್ತ್ರ, ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ್ ವಿಭಾಗಗಳಲ್ಲಿ ಕ್ಲಬ್‌ಗಳನ್ನು ರಚಿಸಿ ಆಯಾ ವಿಭಾಗಕ್ಕೆ ಸಂಭಂಧಿಸಿದ ಚಟುವಟಿಕೆಗಳನ್ನು ಅವುಗಳ ಮೂಲಕ ನಡೆಸಲಾಗುತ್ತಿದೆ.
ಜೀವ ವಿಜ್ಞಾನಗಳ ಕ್ಲಬ್
ನಮ್ಮ ಕಾಲೇಜಿನಲ್ಲಿ ಉತ್ತಮ ಪ್ರಯೋಗಾಲಯ ಸೌಲಭ್ಯವಿದ್ದು, ಜೀವ ವಿಜ್ಞಾನ ಕ್ಲಬ್ಗಳ ಮೂಲಕ ಗಿಡಗಳ ಬೆಳೆಸುವಿಕೆ (ಬಾಟನಿಕಲ್ ಗಾರ್ಡನಿಂಗ್), ತೋಟಗಾರಿಕೆ, ನೀರು ಕುಯಿಲು, ಕಸಿ ಕಟ್ಟುವುದು, ಮಳೆ ನೀರು ಕುಯಿಲು ಮಂತಾದ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ
ಫಿಲಂ ಕ್ಲಬ್
ನಮ್ಮ ಕಾಲೇಜಿನಲ್ಲಿ ಫಿಲಂ ಕ್ಲಬ್ ಒಂದನ್ನು ಸ್ಥಾಪಿಸಲಾಗಿದ್ದು ಇದರ ಮೂಲಕ ಕೆಲವು ಕಲಾತ್ಮಕ, ಪ್ರಶಸ್ತಿ ವಿಜೇತ ಹಾಗೂ ಶಿಕ್ಷಣಕ್ಕೆ ಪೂರಕವಾದ ಸಿನಿಮಾಗಳನ್ನು ವಿದ್ಯಾರ್ಥಿಗಳಿಗೆ ತೋರಿಸಲಾಗುತ್ತದೆ. ಕಳೆದ 25 ವರ್ಷಗಳಿಂದ ನಿರಂತರ ಚಟುವಟಿಕೆಯಲ್ಲಿರುವ ಸಹ್ಯಾದ್ರಿ ಫಿಲಂ ಸೊಸೈಟಿಯೊಂದಿಗೆ ನಮ್ಮ ಕಾಲೇಜು ನಿಕಟ ಸಂಪರ್ಕ ಹೊಂದಿದೆ. ಕನ್ನಡ ಮತ್ತು ಇಂಗ್ಲಿಷ್ ಸಾಹಿತ್ಯ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯವು ನಿಗದಿಪಡಿಸಿದ ಪಠ್ಯಗಳಿಗೆ ಪೂರಕವಾದ ಸಿನಿಮಾಗಳನ್ನು ಫಿಲಂ ಕ್ಲಬ್ನ ಸಂಘಟಕರು ತರುತ್ತಾರೆ. ಚಾರಿತ್ರಿಕ ವ್ಯಕ್ತಿಗಳು, ಚಾರಿತ್ರಿಕ ಸ್ಥಳಗಳು, ಮಹಾನ್ ಕವಿಗಳು, ನಾಟಕಕಾರರ ಕುರಿತ ಸಿನಿಮಾಗಳನ್ನೂ ತೋರಿಸಲಾಗುತ್ತದೆ. ಕಳೆದ ವರ್ಷದಲ್ಲಿ ಈ ಸಿನಿಮಾ ಕ್ಲಬ್ ಎರಡು ದಿನಗಳ ಸಿನಿಮಾ ಹಬ್ಬವನ್ನೂ ಏರ್ಪಡಿಸಿ 8 ಸಿನಿಮಾಗಳನ್ನು ವಿದ್ಯಾರ್ಥಿಗಳಿಗೆ ತೋರಿಸಿತ್ತು.
ಮಹಿಳಾ ವೇದಿಕೆ
ಕಾಲೇಜಿನ ಚಟುಚಟಿಕೆಗಳಲ್ಲಿ ಮಹಿಳೆಯರು ಪ್ರಮುಖ ಪಾಲು ಹೊಂದಿರುವುದರಿಂದ ಒಂದು ಮಹಿಳಾ ವೇದಿಕೆಯ ಅಗತ್ಯವನ್ನು ಮನಗಂಡು ನಮ್ಮ ಕಾಲೇಜಿನಲ್ಲಿ ಅನುಭವಿ ಮಹಿಳಾ ಶಿಕ್ಷಕರ ಮಾರ್ಗದರ್ಶನದಲ್ಲಿ ಮಹಿಳಾ ವೇದಿಕೆಯನ್ನು ರಚಿಸಲಾಗಿದೆ. ಈ ವೇದಿಕೆಯ ವತಿಯಿಂದ ಮಹಿಳೆಯರಿಗೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಈ ವೇದಿಕೆಯು ಮಹಿಳಾ ಸಮುದಾಯದೊಂದಿಗೆ ಸಮಾಲೋಚನೆ ನಡೆಸುವುದಲ್ಲದೇ ಕಾಲೇಜಿನ ವಿದ್ಯಾರ್ಥಿನಿಯರ ಕುಂದು ಕೊರತೆಗಳನ್ನು ತಿಳಿದುಕೊಂಡು ಪರಿಹರಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತದೆ