ಎನ್‌ಸಿಸಿ ನಿರ್ದೇಶನಾಲಯವು ಕೆಡೆಟ್‌ಗಳಿಗಾಗಿ ಮೂರು ಪ್ರಮಾಣ ಪತ್ರ ಪರೀಕ್ಷೆಗಳನ್ನು ಹಮ್ಮಿಕೊಳ್ಳುತ್ತದೆ. ಈ ಪ್ರಮಾಣ ಪತ್ರಗಳನ್ನು ರಕ್ಷಣಾ ಇಲಾಖೆಯು ವಿತರಿಸುತ್ತzತ್ರೀ ಪ್ರಮಾಣ ಪತ್ರ ಪಡೆಯುವ ಕೆಡೆಟ್‌ಗಳಿಗೆ ಹಲವಾರು ಉದ್ಯೋಗ ಮೀಸಲಾತಿ, ಹೆಚ್ಚುವರಿ ಅಂಕಗಳು ಮತ್ತು ಮುಂಭಡ್ತಿಗಳು ಸಿಗುತ್ತವೆ. ಆದರೆ ಈ ವಿಷಯದಲ್ಲಿ ರಾಜ್ಯದಿಂದ ರಾಜ್ಯಕ್ಕೆ ನೀತಿ ನಿಯಮಗಳು ಭಿನ್ನವಾಗಿರುತ್ತವೆ.
ಬಿ ಪ್ರಮಾಣ ಪತ್ರ: ಇದು ಹಿರಿಯ ವಿಭಾಗಕ್ಕಿರುವ ಪ್ರಮಾಣ ಪತ್ರ. ಪ್ರತಿ ಶೈಕ್ಷಣಿಕ ವರ್ಷದಲ್ಲಿ ಎನ್‌ಸಿಸಿ ಬೆಟಾಲಿಯನ್‌ನಲ್ಲಿ ಕಿರುಪರೀಕ್ಷೆಗಳನ್ನು ನಡೆಸಲಾಗುತ್ತದೆ. ಈ ಪರೀಕ್ಷೆಯ ಥಿಯರಿಯಲ್ಲಿ ಕಾಪ್ಸ್ (ಇನ್‌ಪೆಂಟ್ರಿ) ವಿಷಯಗಳು, ನಾಗರಿಕ ರಕ್ಷಣೆ ಮತ್ತು ಪ್ರಥಮ ಚಿಕಿತ್ಸೆ ವಿಷಯಗಳಿರುತ್ತವೆ. ಪ್ರಾಕ್ಟಿಕಲ್ ಪರೀಕ್ಷೆಗಳಲ್ಲಿ ರೈಫಲ್ ಡ್ರಿಲ್, ಮ್ಯಾಪ್ ರೀಡಿಂಗ್ ಮತ್ತು ರೈಫಲ್ ಹಾಗೂ ಮಷಿನ್ ಗನ್ ಸ್ವಚ್ಛಗೊಳಿಸುವ ಮತ್ತು ಸರಿಯಾಗಿಟ್ಟುಕೊಳ್ಳುವ ವಿಷಯಗಳಿರುತ್ತವೆ. ಸೀನಯರ್ ವಿಂಗ್ ಕೆಡೆಟ್‌ಗಳಿಗೆ ಪ್ರಥಮ ಚಿಕಿತ್ಸೆ ಹಾಗೂ ಸಿಗ್ನಲಿಂಗ್ ಕುರಿತ ಪ್ರಶ್ನೆಗಳನ್ನು ಅವರ ಪ್ರಾಯೋಗಿಕ ಪರೀಕ್ಷೆಗಳ ಭಾಗವಾಗಿ ಕೇಳಲಾಗುತ್ತದೆ. ಬಿ-ಪ್ರಮಾಣ ಪತ್ರ ಪರೀಕ್ಷೆಯಲ್ಲಿ ತೇರ್ಗಡೆ ಹೊಂದುವ ಕೆಡೆಟ್‌ಗಳಿಗೆ ಅನೇಕ ಸರ್ಕಾರಿ ಹುದ್ದೆಗಳಲ್ಲಿ ಉಚಿತ ಅಂಕಗಳನ್ನು ಮತ್ತು ತೂಕ- ವಯಸ್ಸು ಅಂಕಗಳನ್ನು ಯೂನಿವರ್ಸಿಟಿ ಪರೀಕ್ಷೆಗಳಲ್ಲಿ ನೀಡಲಾಗುತ್ತದೆ. ಸಜೆಂಟ್ ಅಥವಾ ಅದಕ್ಕಿಂತ ಹೆಚ್ಚಿನ ಶ್ರೇಣಿಯನ್ನು ಹೊಂದಲು ಕೆಡೆಟ್‌ಗಳು ಈ ಪ್ರಮಾಣ ಪತ್ರವನ್ನು ಹೊಂದಿರಬೇಕಾಗುತ್ತದೆ
ಸಿ ಪ್ರಮಾಣಪತ್ರ: ಈ ಪ್ರಮಾಣ ಪತ್ರವು ಪಠ್ಯಕ್ರಮದಲ್ಲಿ ಬಿ- ಪ್ರಮಾಣ ಪತ್ರದಂತೆಯೇ ಇರುತ್ತದೆ. ಆದರೆ ಇಲ್ಲಿ ಕೇಳಲಾಗುವ ಪ್ರಶ್ನೆಗಳು ಹೆಚ್ಚು ಕಠಿಣವಾಗಿರುತ್ತವೆ. ಈ ಪರೀಕ್ಷೆಯಲ್ಲಿ ತೇರ್ಗಡೆ ಹೊಂದುವ ಕೆಡೆಟ್‌ಗಳಿಗೆ ಬಿ-ಪ್ರಮಾಣ ಪತ್ರ ಪಡೆದವರಿಗೆ ಇರುವ ಸೌಲಭ್ಯಗಳೇ ಇರುತ್ತವೆ. ಆದರೆ ಇವರಿಗೆ ತೂಕ-ವಯಸ್ಸಿನ ಅಂಕಗಳು ಅವರಿಗಿಂತ ಹೆಚ್ಚಿರುತ್ತವೆ. ಬಿ ಗ್ರೇಡ್ ಆಥವಾ ಹೆಚ್ಚಿ ಶ್ರೇಣಿಯಲ್ಲಿ ಸಿ-ಪ್ರಮಾಣ ಪತ್ರ ಪರೀಕ್ಷೆಯಲ್ಲಿ ತೇರ್ಗಡೆಯಾಗುವ ಕೆಡೆಟ್‌ಗಳಿಗೆ ಚೆನ್ನೈನ OTA ಪರೀಕ್ಷೆಗಳಲ್ಲಿ ಅಧಿಕಾರಿಗಳ ಆಯ್ಕೆ ಪರೀಕ್ಷೆಗೆ ನಡೆಸುವ ಲಿಖಿತ ಪರೀಕ್ಷೆಯಿಂದ ವಿನಾಯಿತಿ ದೊರೆಯುತ್ತದೆ. ಸಿ-ಪ್ರಮಾಣ ಪತ್ರವನ್ನು ಹೊಂದಿ 50% ಅಂಕ ಗಳಿಸುವ ಕೆಡೆಟ್ ನೇರವಾಗಿ ಸೇವಾ ಆಯ್ಕೆ ಆಯೋಗವು ನಡೆಸುವ ಸಂದರ್ಶನಕ್ಕೆ ಹಾಜರಾಗಲು ಅರ್ಜಿ ಸಲ್ಲಿಸಬಹುದಾಗಿರುತ್ತದೆ.
ಎನ್‌ಸಿಸಿ ಅಧಿಕಾರಿ
ಶ್ರೀ ಆರ್. ಸುರೇಶ್ ಎಮ್ಎ,