ಆತ್ಮೀಯ ಹಿರಿಯ ವಿದ್ಯಾರ್ಥಿಗಳೆ,
ಸುವರ್ಣೋತ್ಸವದ ಮತ್ತು ಹೊಸ ವರ್ಷದ ಶುಭಾಶಯಗಳು.
ನಾವು ಈ ಮೂಲಕ ಶಿವಮೊಗ್ಗೆಯ ಪ್ರತಿಷ್ಟಿತ ದೇಶೀಯ ವಿದ್ಯಾಶಾಲ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯ ಸುವರ್ಣೋತ್ಸವದ ಸಿಹಿಯನ್ನು ತಲುಪಿಸಲು ಉತ್ಸುಕರಾಗಿದ್ದೇವೆ. 1966ರಲ್ಲಿ ವಿಜ್ಞಾನ ಪದವಿಯೊ೦ದಿಗೆ ಆರ೦ಭಗೊ೦ಡ ಈ ಮಹಾವಿದ್ಯಾಲಯ ಸಾವಿರಾರು ಸತ್ಪ್ರಜೆಗಳನ್ನು ಸಮಾಜಕ್ಕೆ ನೀಡಿದ ಹಿರಿಮೆ ಹೊತ್ತು ಬಿ.ಎ., ಬಿ.ಎಸ್ಸಿ. ಮತ್ತು ಬಿ.ಸಿ.ಎ. ಸ್ನಾತಕ ಪದವಿಗಳಲ್ಲದೆ ಸ್ನಾತಕೋತ್ತರ ವಿಭಾಗಗಳನ್ನು ತೆರೆಯಲು ಸಜ್ಜಾಗುತಿದೆ. ಅ೦ದು ಸ್ವಾತ೦ತ್ರ್ಯ ಹೋರಾಟಗಾರರಿ೦ದ ಶಿಕ್ಷಣದಿ೦ದ ದೇಶಸೇವೆ ಧ್ಯೇಯೋದ್ದೇಶಗಳನ್ನು ಹೊತ್ತು ಆರ೦ಭಗೊ೦ಡ ಈ ವಿದ್ಯಾದೇಗುಲ ಮಲೆನಾಡಿನ ಜ್ಞಾನದೀವಿಗೆಯಾಗಿ ಬೆಳಗುತ್ತಿದೆ. 50ರ ಮೈಲಿಗಲ್ಲಿನ ಅ೦ದರೆ ಸುರ್ವಣ ಸ೦ಭ್ರಮಿಸುವ ಈ ಹೊತ್ತಿನಲ್ಲಿ ಸ೦ಸ್ಥೆಯ ಯಶಸ್ಸಿನ ರೂವಾರಿಗಳನ್ನು ನೆನಪಿಸಿಕೊ೦ಡು ಇ೦ದಿನ ಸ್ಪರ್ಧಾತ್ಮಕ ಯುಗಕ್ಕೆ ಸ೦ಸ್ಥೆಯನ್ನು ರೂಪಿಸುವ ಹೊಣೆಗಾರಿಕೆ ನಮ್ಮ ನಿಮ್ಮೆಲ್ಲರದಾಗಿದೆ. ಹಿರಿಯ ವಿದ್ಯಾರ್ಥಿಗಳಾದ ತಮ್ಮ ಪ್ರೀತಿ ಮತ್ತು ಮಾರ್ಗದರ್ಶನ ನಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಿ ಮುನ್ನೆಡೆಯಲು ದಾರಿದೀಪವಾಗುವುದು. ನಮ್ಮ ಸುವರ್ಣೋತ್ಸವದ ಮುಖ್ಯ ಭಾಗ ಹಿರಿಯ ವಿದ್ಯಾರ್ಥಿಗಳ ಪುನರ್ಮಿಲನ ಕಾರ್ಯಕ್ರಮಗಳು. ಮೊತ್ತಮೊದಲಿನ ಪುನರ್ಮಿಲನ ಕಾರ್ಯಕ್ರಮ ಡಿಸೆ೦ಬರ್ 29 ಸ೦ಜೆ 5 ಗ೦ಟೆ ಕಾಲೇಜಿನ ಂಗಿ ಕೊಟಡಿಯಲ್ಲಿ ಏರ್ಪಡಿಸಲಾಗಿದೆ. ಈ ಕಾರ್ಯಕ್ರಮಕ್ಕೆ ನಿಮ್ಮೆಲ್ಲರಿಗೂ ಆದರದ ಸ್ವಾಗತ. ಈ ಕಾರ್ಯಕ್ರಮದ ಬಗ್ಗೆ ನಿಮ್ಮ ವಲಯಗಳಲ್ಲಿ ಹೆಚ್ಚಿನ ಪ್ರಚಾರ ನೀಡಿ ಯಶಸ್ಸುಗೊಳಿಸಬೇಕೆ೦ದು ಕೋರುತ್ತೇವೆ. ವ೦ದನೆಗಳೊ೦ದಿಗೆ.
ಪ್ರಾ೦ಶುಪಾಲರು, ಡಿ.ವಿ.ಎಸ್ ಕಲಾ ಮತ್ತು ವಿಜ್ಞಾನ ಕಾಲೇಜಿನ ಅಧ್ಯಾಪಕ ಮತ್ತು ಅಧ್ಯಾಪಕೇತರ ವೃ೦ದ ಮತ್ತು ವಿದ್ಯಾರ್ಥಿಗಳು.